ಮಾನ್ಯತಾ ಟೆಕ್​ ಪಾರ್ಕ್​ನಲ್ಲಿ ಯಾರೂ ಘೊಷಣೆ ಕೂಗಿಲ್ಲ... ಸದಾನಂದ ಗೌಡ

ತುಮಕೂರು: ಮಹಾಘಟ ಬಂಧನ್ ಎಂಬ ಕಿಚಡಿ ಸಂಘಟನೆ ಮಾಡಿಕೊಂಡಿರುವವರು ಬಹುತೇಕರು ತಾವೇ ಪ್ರಧಾನಿಯಾಗಬೇಕೆಂಬ ಹಂಬಲ ಹೊಂದಿದ್ದಾರೆ. ಅದ್ರಲ್ಲಿ ರಾಹುಲ್ ಗಾಂಧಿ, ಹೆಚ್. ಡಿ. ದೇವೇಗೌಡ, ಮಾಯಾವತಿ, ಮಮತಾ ಬ್ಯಾನರ್ಜಿ ಎಲ್ಲರೂ ಪ್ರಧಾನಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎಂದು ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಟೀಕಿಸಿದರು.