ಆಪಲ್ ಐ-ಫೊನ್ 6ನಲ್ಲಿ ಹೊಸದೇನಿದೆ?

1)ಸುಧಾರಿಸಿದ ‍ಕ್ಯಾಮೆರ: ಹೊಸ ಐ-ಫೊನ್ ಎರಡು ಮಾದರಿಗಳಲ್ಲಿ ಲಭ್ಯವಿದೆ-6 ಮತ್ತು 6ಪ್ಲಸ್.
ಎರಡೂ ಮಾದರಿಗಳು ಸ್ವಯ‍ಂ-ಇಮೇಜ್ ಸ್ಟೆಬಿಲೈಸೇಶನ್ ಸೌಲಭ್ಯ ಹೊಂದಿದ್ದು ಫೊನಿನಲ್ಲಿರುವ ಗೈರೊಸ್ಕೊಪ್ ಮತ್ತು ವೇಗದ A8 ಪ್ರೊಸೆಸರ್ ಬಳಸಿ ಅತ್ತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆಯಬಹುದು.
2)ಅತ್ಯುತ್ತಮ ವಿಡಿಯೋ:ಬಳಕೆದಾರರು 60fps ವೇಗದಲ್ಲಿ ಉತ್ತಮ ಗುಣಮಟ್ಟದ 1080p ವಿಡಿಯೋ ಚಿತ್ರೀಕರಿಸಬಹುದು.ಅಲ್ಲದೆ 240p ಗುಣಮಟ್ಟದ ನಿಧಾನ ಗತಿಯ ವಿಡಿಯೋ ಸಹ ಚಿತ್ರೀಕರಿಸಬಹುದು.
3)ನಿಮ್ಮ ಕ್ರೆಡಿಟ್ ಕಾರ್ಡ್ ಮನೆಯಲ್ಲೆ ಬಿಡಿ:
ಐ-ಫೊನಿನ ಎರಡು ಮಾದರಿಗಳಲ್ಲಿ ಆಪಲ್ ಪೇ ಸೌಲಭ್ಯವಿದ್ದು,ಇದರಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಸುರಕ್ಷಿತವಾಗಿ ಶೇಖರಿಸಿ,ನಂತರ ಆಯ್ದ ಮಳಿಗೆಗಳಲ್ಲಿ ಕ್ರೆಡಿಟ್ ಕಾರ್ಡ್‍ನಂತೆ ಬಳಸಬಹುದು.ಈ ಸೌಲಭ್ಯವು ಸದ್ಯ ಅಮೇರಿಕದಲ್ಲಿ ಮಾತ್ರ ಲಭ್ಯವಿದ್ದು ಮುಂದಿನ ದಿನಗಳಲ್ಲಿ ಪ್ರಪಂಚದಾದ್ಯಂತ ವಿಸ್ತರಿಸಲು ಕಂಪನಿ ಯೋಜಿಸಿದೆ.ಆಪಲ್ ಪೇ ಸೌಲಭ್ಯವು nfc ತಂತ್ರಜ್ಞಾನವನ್ನು ಬಳಸುತ್ತದೆ.
4)ಅತ್ಯುತ್ತಮ ಬ್ಯಾಟರಿ:ಅಪರಿಚಿತ ಜಾಗದಲ್ಲಿ ಬ್ಯಾಟರಿ ಚಾರ್ಜ್ ಮುಗಿದ ಫೊನ್ ಅತ್ಯಂತ ತ್ರಾಸದಾಯಕ ಮತ್ತು ಕೆಟ್ಟ ಅನುಭವ ನೀಡಬಹುದು.ಅದೃಷ್ಟವಶಾತ್ ಐ-ಫೊನ್‍ನ ಎರಡೂ ಮಾದರಿಗಳು, ಸುಧಾರಿತ ಬ್ಯಾಟರಿಗಳನ್ನು ಹೊಂದಿವೆ.ಐ-ಫೊನ್ 6 ರಲ್ಲಿ 16 ಗಂಟೆಗಳ ಟಾಕ್ಟ್ ಟೈಮ್ ಮತ್ತು 10ಗಂಟೆಗಳ ಅಂತರ್ಜಾಲ ವೀಕ್ಷಣೆ ಮಾಡಬಹುದು.ಐ-ಫೊನ್ 6ಪ್ಲಸ್ ನಲ್ಲಿ ಬರೋಬ್ಬರಿ 24ಗಂಟೆಗಳ ಟಾಕ್ ಟೈಮ್ ಮತ್ತು 12 ಗಂಟೆಗಳ ಅಂತರ್ಜಾಲ ವೀಕ್ಷಣೆ ಮಾಡಬಹುದು.ಈ ಹಿಂದಿನ ಐ-ಫೊನ್ 5ರಲ್ಲಿ ಕೇವಲ 10 ಗಂಟೆಗಳ ಟಾಕ್ ಟೈಮ್ ಮತ್ತು 8ಗಂಟೆಗಳ ಅಂತರ್ಜಾಲ ವೀಕ್ಷಣೆ ಸಾಧ್ಯವಿತ್ತು.
5)ಆರೋಗ್ಯ ಮತ್ತು ಫಿಟ್‍ನೆಸ್ ಆಪ್:ಆಪಲ್‍ನ ಹೊಸ ವಾಚ್ ಪೆಡೋಮೀಟರ್‍ನಂತೆ ಕೆಲಸ ಮಾಡಬಲ್ಲದಾಗಿದ್ದು ಇದು ನಿಮ್ಮ ನಡಿಗೆಯ ವಿವರಗಳನ್ನು ದಾಖಲಿಸುತಿರುತ್ತದೆ.ಅಲ್ಲದೆ ನಿಮ್ಮ ಹೃದಯದ ಬಡಿತದ ವಿವರಗಳನ್ನು ಸಹ ದಾಖಲಿಸುತ್ತದೆ.ಅಲ್ಲದೆ ಐಓಎಸ್-8 ನಲ್ಲಿ ಲಭ್ಯವಿರುವ ಆರೋಗ್ಯ ಸಂಬಂಧಿ ಆಪ್ ಬಳಸಿ ನಿಮ್ಮ ಆರೋಗ್ಯ ಮತ್ತು ಫಿಟ್ನೆಸ್‍ಗೆ ಸಂಬಂಧಿಸಿದ ವಿವರಗಳನ್ನು ಒಂದೇ ಜಾಗದಲ್ಲಿ ವೀಕ್ಷಿಸಬಹುದು.
6)ವಾಚನ್ನು ಕೀಯಂತೆ ಬಳಸಿ:ಆಪಲ್ ಕಂಪನಿಯು ಸ್ಟಾರ್‍ಹುಡ್ ಹೋಟೆಲ್‍ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಆಪಲ್ ವಾಚ್‍ನ ಆಪ್ ಒಂದನ್ನು ಬಳಸಿ ಆಯ್ದ ಹೋಟೆಲ್ ಕೋಣೆಗಳ ಬೀಗ ತೆರೆಯಬಹುದು.
7)ದೊಡ್ಡ ಪರದೆಗಳು:ಹೊಸ ಐ-ಫೊನ್ 4.7” ಮತ್ತು 5.5” ಗಾತ್ರದ ಪರದೆಗಳೊಂದಿಗೆ ಲಭ್ಯವಿದೆ.ಐ-ಫೊನ್ 5ಗೆ ಹೋಲಿಸಿದರೆ ಇದು ಕ್ರಮವಾಗಿ 17% ಮತ್ತು 37%ರಷ್ಟು ಹೆಚ್ಚು!
ಲಭ್ಯವಿಲ್ಲದ ನಿರೀಕ್ಷಿತ ಸೌಲಭ್ಯಗಳು:
ಆಪಲ್ ಕಂಪನಿಯು ತನ್ನ ಉತ್ಪನ್ನಗಳ ಬಗ್ಗೆ ಭಾರಿ ಗೌಪ್ಯತೆಯನ್ನು ಕಾಪಾಡುವುದರಲ್ಲಿ ಹೆಸರುವಾಸಿ.ಐ-ಫೊನ್ 6ನಲ್ಲಿರುವ ಕ್ಯಾಮರದ ಬಗ್ಗೆ ಯಾವುದೇ ವಿವರಗಳು ಅಂತರ್ಜಾಲದಲ್ಲಿ ಲಭ್ಯವಾಗದ ಹಾಗೆ ಜಾಗ್ರತೆ ವಹಿಸಿತ್ತು.ಹಾಗಾಗಿ ಈ ವಿಷಯದ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತಿದ್ದವು.ಅದರಲ್ಲಿ ಕೆಲವು 4.7ಇಂಚು ಅಗಲದ ಪರದೆಯ ಐ-ಫೊನ್‍ 6 ಮತ್ತು ಆಪಲ್ ಕಂಪನಿಯ ಬಗ್ಗೆ ನಮಗೆ ತಿಳಿದಿರುವ ವಿವರಗಳೊಂದಿಗೆ ತಾಳೆಯಾಗುತ್ತವೆ.
ಮೊದಲನೆಯದಾಗಿ ಆಪಲ್ ಕಂಪನಿಯು 8ಮೆಗಾಪಿಕ್ಸೆಲ್ ಕ್ಯಾಮೆರವನ್ನೆ ಮುಂದುವರಿಸುವುದೆಂದು ನಿರೀಕ್ಷಿಸಲಾಗಿದೆ.ಮೆಗಾಪಿಕ್ಸೆಲ್ ಹೆಚ್ಚಿಸುವ ಬದಲು 4.7” ಐ-ಫೊನ್6 ಕ್ಯಾಮೆರದಲ್ಲಿ ಹೊಸದಾದ ದೊಡ್ದ 1.26” ಸೆನ್ಸರ್(ಐ-ಫೊನ್ 5ಎಸ್‍ 1/3” ಸೆನ್ಸರ್ ಹೊಂದಿತ್ತು) ಹೊಂದಿದೆ ಎಂದು ಹೇಳಲಾಗಿದೆ.ಇದು ದೊಡ್ಡದಾದ 1.75µm ಪಿಕ್ಸೆಲ್ಸ್ ಮತ್ತು ಅಗಲದ f/2.0 ಅಪರ್ಚರ್ ಹೊಂದಿದೆ.ಕೊನೆಯದಾಗಿ, 4.7” ಅಗಲದ ಪರದೆಯ ಐ-ಫೊನ್ 6 ಇಮೇಜ್ ಸ್ಟೆಬಿಲೈಸೇಶನ್ ಸೌಲಭ್ಯ ಹೊಂದಿರಲಿದೆ.ಕಂಪನಿಯು ತಯಾರಿಕ ವೆಚ್ಚ ತಗ್ಗಿಸಲು ಮತ್ತು ಗಾತ್ರ ಚಿಕ್ಕದಾಗಿರಿಸಲು ಯೊಜಿಸಿದೆ.
ಮತ್ತಷ್ಟು ವಿವರಗಳು:
ಐ-ಫೊನ್ 6 ಮತ್ತು ಐ-ಫೊನ್6 ಪ್ಲಸ್ ಪರದೆ:
ಐ-ಫೊನ್ 6 4.7” 1334X750 ಐಪಿಎಸ್ ಪರದೆಯನ್ನು ಹೊಂದಿರಲ್ಲಿದ್ದು,ಐ-ಫೊನ್ 6ಪ್ಲಸ್ 5.5ಇಂಚು, 1920 x 1080 ಪಿಕ್ಸೆಲ್ ಪ್ಯಾನೆಲ್ ಪರದೆಯನ್ನು ಹೊಂದಿರಲಿದೆ.ಕಂಪನಿಯು ಪರದೆಯನ್ನು ದೊಡ್ಡದಾಗಿಸುವುದೆಂದು ಈ ಹಿಂದೆಯೇ ನಿರೀಕ್ಷಿಸಲಾಗಿತ್ತು.ಸದ್ಯ ಇರುವ ಗ್ರಾಹಕರು ಈ ಮುಂಚೆ ಲಭ್ಯವಿದ್ದ 4ಇಂಚುಗಳ ಪರದೆಗೆ ಹೊಂದಿಕೊಂಡಿದ್ದರು.
ವಿನ್ಯಾಸ:
ಹೊಸ ಐ-ಫೊನ್ ಮಾದರಿಗಳು ವಕ್ರ ಅಂಚುಗಳನ್ನು ಹೊಂದಿದ್ದು, ಎರಡೂ ಮಾದರಿಗಳು ಗಾತ್ರದಲ್ಲಿ ಭಾರಿ ಸಣ್ಣ ಗಾತ್ರವನ್ನು ಹೊಂದಿದೆ.ಐ-ಫೊನ್ 6 ಮಾದರಿಯು 6.9ಎಮ್ಎಮ್ ಮತ್ತು ಐ-ಫೊನ್ 6ಪ್ಲಸ್ ಮಾದರಿಯು 7.1ಎಮ್‌ಎಮ್ ನಷ್ಟು ದಪ್ಪಗಿದೆ.ಇದು ಐ-ಫೊನ್ 5ಎಸ್‍ಗಿಂತ ಚಿಕ್ಕದು.
ಮುಖ್ಯ ಗುಣವೈಶಿಷ್ಟ್ಯಗಳು:
ಐ-ಫೊನ್‍ನ ಹೊಸ ಮಾದರಿಗಳು A8 ಚಿಪ್‍ಸೆಟ್ ಹೊಂದಿದ್ದು,20% ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿದೆ ಮತ್ತು ಗ್ರಾಫಿಕ್ಸ್ ವಿಭಾಗದಲ್ಲಿ 50% ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿದೆ.
ಎಮ್7 ಬದಲಾಗಿ ಎಮ್8 ಕೋ ಪ್ರೋಸೆಸರ್ ಹೊಂದಿದೆ.ಇದು ಎಮ್7ಗಿಂತ ಚುರುಕಾಗಿದ್ದು, ನೀವು ನಡೆಯುತ್ತಿದ್ದರೆ ಅಥವಾ ಸೈಕ್ಲಿಂಗ್ ಮಾಡುತ್ತಿದ್ದರೆ ಅವೆರಡರ ನಡುವಿನ ವ್ಯತ್ಯಾಸ ತಿಳಿಯಬಲ್ಲದು.ಅಲ್ಲದೆ ವಾಯುಭಾರವನ್ನು ಕೂಡ ಲೆಕ್ಕ ಹಾಕಬಲ್ಲದು!
ಹೊಸದಾಗಿ 128ಜಿಬಿ ಸಾಮಾರ್ಧ್ಯದ ಫೊನ್ ಲಭ್ಯವಿದ್ದು,32ಜಿಬಿ ಮಾದರಿಯು ಲಭ್ಯವಿಲ್ಲ.
ಟಚ್ ಐಡಿ ಮತ್ತು ಆಪಲ್ ಪೇ:
ಐ-ಫೊನ್‍ನ ಎರಡು ಮಾದರಿಗಳು ಆಪಲ್ ಪೇ ಮೊಬೈಲ್ ಪಾವತಿ ಸೇವೆಗೆ ಬಳಸಬಹುದಾದ nfc ಚಿಪ್‍ಸೆಟ್ ಹೊಂದಿವೆ.ಈ ಸೌಲಭ್ಯವು ಅಮೆರಿಕನ್ ಎಕ್ಸ್‍‌ ಪ್ರೆಸ್,ವಿಸಾ ಮತ್ತು ಮಾಸ್ಟರ್ ಕಾರ್ಡ್ ಸಹಯೊಗದೊಂದಿಗೆ ಲಭ್ಯವಿದೆ.

ಬ್ಯಾಟರಿ:
4.7” ಮಾದರಿಯು 1810mah ಮತ್ತು 5.5” ಮಾದರಿಯು 2915mah ಬ್ಯಾಟರಿಗಳನ್ನು ಹೊಂದಿವೆ.

Tags: