ಬದುಕನ್ನು ನೀರಿನಂತೆ ಹರಿಯಲು ಬಿಡೋಣ!

ಜೀವನ ಅಂದರೆ ಹರಿಯುವ ನದಿ ಇದ್ದಂತೆ. ನೀರಿನ ಒಂದು ಅದ್ಭುತ ಗುಣವೆಂದರೆ ಅದು ಯಾವ ಪಾತಳಿಯೇ ಇರಲಿ, ಅದಕ್ಕೆ ತಕ್ಕ ಹಾಗೆ ತನ್ನ ಹರಿವು, ಹರವು, ಆಕಾರ ರಭಸವನ್ನು ಬದಲಿಸಿಕೊಳ್ಳುತ್ತದೆ. ನೆಲವೇ ಸಿಗದಿದ್ದಾಗ ಮೇಲಿಂದ ಧುಮುಕಿ ಜಲಪಾತವಾಗುತ್ತದೆ. ಅಗಲ ಮೈದಾನದಲ್ಲಿ ಮಹಾನದಿಯಾಗುತ್ತದೆ. ಕಿರಿದಾದ ಕಣಿವೆಯಲ್ಲಿ ಝರಿಯಾಗುತ್ತದೆ. ಚೊಂಬಿನಲ್ಲಿಟ್ಟರೆ ಚೊಂಬು ನೀರು, ಟ್ಯಾಂಕಿನಲ್ಲಿಟ್ಟರೆ ಟ್ಯಾಂಕಿನ ನೀರು, ಚಮಚದಲ್ಲಿ ಚಮಚದ ನೀರು, ಮೋಡದಿಂದ ಸುರಿದರೆ ಮಳೆ ನೀರು. ಇದೇ ನೀರನ್ನು ಫ್ರಿಜ್ಜಿನೊಳಗೆ ಇಟ್ಟರೆ ಮಂಜುಗಡ್ಡೆ. ಎಲ್ಲವೂ ಮೂಲತಃ ನೀರೇ.

ಹೇಮಲಂಬ ಸಂವತ್ಸರ ಯುಗಾದಿಯ ಶುಭಾಶಯ

ಅರುವತ್ತು ಸಂವತ್ಸರಗಳ ಆವರ್ತದಲ್ಲಿ ಪ್ರಥಮಾರ್ಧ ಮುಗಿದು ದ್ವಿತೀಯಾರ್ಧ ಆರಂಭ. ನಾಡಿದ್ದು ಮಂಗಳವಾರ ಚಾಂದ್ರಮಾನ ಯುಗಾದಿಯಂದು ಶುರುವಾಗುತ್ತಿರುವುದು 31ನೆಯ ಸಂವತ್ಸರ. ಚಿಕ್ಕಂದಿನಲ್ಲಿ ಸಂಜೆಹೊತ್ತು ಬಾಯಿಪಾಠ ಹೇಳುವಾಗ ಸಂವತ್ಸರಗಳ ಪಟ್ಟಿಯನ್ನು ನಾವು ಪ್ರಥಮಾರ್ಧ ದ್ವಿತೀಯಾರ್ಧ ಎಂದು ಭಾಗ ಮಾಡುತ್ತಿರಲಿಲ್ಲ. ಬದಲಿಗೆ ತಲಾ 20 ಸಂವತ್ಸರಗಳ ಮೂರು ವಿಭಾಗಗಳು. ಎಲ್ಲ ಅರುವತ್ತನ್ನೂ ಹೇಳಿಮುಗಿಸಿದ ಮೇಲೆ ಕೊನೆಗೆ ‘ಉತ್ತಮದಲ್ಲಿ 20, ಮಧ್ಯಮದಲ್ಲಿ 20, ಕನಿಷ್ಠದಲ್ಲಿ 20 ಅಂತೂ 60 ಸಂವತ್ಸರಗಳು’ ಎನ್ನುತ್ತಿದ್ದೆವು. ಮಗ್ಗಿ ಪುಸ್ತಕದಲ್ಲಿ ಸಂವತ್ಸರಗಳ ಪಟ್ಟಿ ಅಚ್ಚಾಗಿರುತ್ತಿದ್ದದ್ದೂ ಅದಕ್ಕೆ ಅನುಕೂಲವಾಗುವಂತೆಯೇ ಇರುತ್ತಿತ್ತು. ತಲಾ 20ರ ಮೂರು ಸ್ತಂಭಗಳು.

ಪದವಿ ನಂತರದ ಚಿಂತೆ ಬೇಡ

ಪ್ರತಿ ಜಿಲ್ಲೆಯಲ್ಲೂ ಸ್ಥಾಪನೆಯಾಗಲಿದೆ ಕೌಶಲ ಅಭಿವೃದ್ಧಿ ಕೇಂದ್ರ

ಉ.ಪ್ರ. ಡೆಪ್ಯುಟಿ ಸಿಎಂ ಅನ್ನು ಏನಂತಾರೆ?: ಉಪ”ಯೋಗಿ” ಸಿಎಂ

ಹೈ-ಫೈವ್
ಯೋಗಿ ಆದಿತ್ಯನಾಥ್
ಅಲ್ಲಾ ಸ್ವಾಮಿ, ಹೀಗೆ ಕಿಂಗ್ ಮೇಕರ್‌ಗಳೇ ಕಿಂಗ್ ಆಗ್‌ಬಿಟ್ರೆ, ಪಾಪ ಕುರ್ಚಿ ಪಾಡಿಗಾಗಿ ರಾಜಕೀಯಕ್ಕೆ ಬಂದವರ ಕಥೆ ಏನು?
ಅದರಲ್ಲೇನ್ ತಪ್ಪು? ಕಿಂಗ್ ಮೇಕರ್‌ಗಳು ಕಿಂಗ್ ಆಗಿದ್ದಕ್ಕೆ ನೀವು ಯಾ’ಕಿಂಗ್’ ಆಡ್ತಾ ಇದೀರೋ ಗೊತ್ತಾಗ್ತಿಲ್ಲ..
ಹಾಗಲ್ಲ, ನೀವು ಮಠಗಳಲ್ಲಿರೋ ಯೋಗಿಗಳಲ್ಲವೇ? ನಿಮಗೆ ಕ್ವೀನ್ ಇರಲ್ಲ, ಸೋ ಕಿಂಗ್ ಆಗೋದು ಬೇಕಿತ್ತಾ ಅಂತ ಅಷ್ಟೆ..
ನಾನು ಕ್ವೀನ್ ಆಸೆಗಾಗಿ ಕಿಂಗ್ ಆಗಿಲ್ಲ, ಸಮಾಜವನ್ನು ಕ್ಲೀನ್ ಮಾಡೋ ಆಸೆಯಿಂದ ‘ಉತ್ತರಾಧಿಕಾರಿ’ ಆಗಿರೋದು.

ಇಲ್ಲಿ ಗಡಿರೇಖೆಗಳು ಅತಿ ತೆಳು

ವಿದೇಶ ಕಾಲ
ನೀವು ಹುಬ್ಬಳ್ಳಿಯಲ್ಲಿ ನಿಂತುಕೊಂಡರೆ ಧಾರವಾಡ ಕಾಣಿಸುವುದಿಲ್ಲ. ಹುಬ್ಬಳ್ಳಿಯ ಸರಹದ್ದಾದ ಉಣಕಲ್ ಕೆರೆ ಅಥವಾ ನವನಗರದ ಹತ್ತಿರ ನಿಂತು ನೋಡಿದರೆ, ಮೈಸೂರಾಗಲಿ, ಮದ್ದೂರಾಗಲಿ ಕಾಣಿಸುವುದಿಲ್ಲ. ಅಂದರೆ ಒಂದು ಊರಿನಲ್ಲೋ, ನಗರದಲ್ಲೋ ನಿಂತು ದಿಟ್ಟಿಸಿದರೆ ಮತ್ತೊಂದು ಊರು ಗೋಚರಿಸುವುದಿಲ್ಲ. ಆದರೆ ಫ್ರಾನ್‌ಸ್‌‌ನ ಸ್ಟ್ರಾಸ್‌ಬರ್ಗ್ ನಗರದಲ್ಲಿ ನಿಂತುಕೊಂಡರೆ ಜರ್ಮನಿ ದೇಶವೇ ಕಾಣಿಸುತ್ತದೆ!