ಮಂಗಳೂರಿನ ಸಮುದ್ರದಲ್ಲಿ ಕಾಣಿಸಿಕೊಂಡ ಅತಿ ವಿರಳ ಸುಂಟರಗಾಳಿ!

ಮಂಗಳೂರು: ಸಮುದ್ರ ತೀರದಲ್ಲಿ ಸುಂಟರಗಾಳಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಇಂತಹ ಅಪರೂಪದ ದೃಶ್ಯವೊಂದು ಮಂಗಳೂರಿನ ಪಣಂಬೂರು ಸಮುದ್ರ ತೀರದಲ್ಲಿ ಕಾಣಿಸಿಕೊಂಡಿದೆ.

ಶಾಸಕರ ಭವನಕ್ಕೆ ಹೊಸ ನಿಯಮ ಜಾರಿಗೆ ತಂದ ಸ್ಪೀಕರ್‌‌‌!

ಬೆಂಗಳೂರು: ಶಾಸಕರ ಭವನ ದುರ್ಬಳಕೆಯಾಗುತ್ತಿರುವುದನ್ನು ತಡೆಯಲು ಹೊಸ ಸರ್ಕಾರದಲ್ಲಿ ಹೊಸ ನಿಯಮ ಜಾರಿಗೆ ಬಂದಿದೆ. ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರು ಈ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ.

ಇಂಗ್ಲೆಂಡ್‌‌ನಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ ಇಂಡಿಯಾ 'ಎ'.. ಮಿಂಚಿದ ಪೃಥ್ವಿ ಶಾ,ಅಯ್ಯರ್‌,ಕಿಶನ್‌!

ಲೀಡ್ಸ್‌‌: ಕೋಚ್‌ ರಾಹುಲ್‌ ದ್ರಾವಿಡ್‌ ಹುಡುಗರು ಇಂಗ್ಲೆಂಡ್‌‌ನಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ. ಇಂಗ್ಲೆಂಡ್‌‌ ಕ್ರಿಕೆಟ್‌ ಬೋರ್ಡ್‌ XI ತಂಡದೊಂದಿಗೆ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ 125ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ರೈತರ ಸಾಲ ಮನ್ನಾ-ಕಾವೇರಿ ಪ್ರಾಧಿಕಾರ ಕುರಿತು ಪಿಎಂ ಜೊತೆ ಸಿಎಂ ಹೆಚ್‌ಡಿಕೆ ಚರ್ಚೆ

ಬೆಂಗಳೂರು/ನವದೆಹಲಿ: ರೈತರ ಸಾಲ ಮನ್ನಾ, ಕಾವೇರಿ ಪ್ರಾಧಿಕಾರ ರಚನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಎಂ ಕುಮಾರಸ್ವಾಮಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಫಿಫಾ ವಿಶ್ವಕಪ್‌ ಫುಟ್ಬಾಲ್‌ : 60 ವರ್ಷಗಳ ನಂತ್ರ ಮೊದಲ ಪಂದ್ಯದಲ್ಲಿ ಗೆದ್ದ ಸ್ವೀಡನ್‌!

ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್‌ ಮತ್ತೊಂದು ಪಂದ್ಯದಲ್ಲಿ ಸ್ವೀಡನ್, ಸೌತ್ ಕೊರಿಯಾ ವಿರುದ್ಧ 1-0 ಅಂತರದ ಗೆಲುವು ದಾಖಲಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.